Tuesday, March 31, 2026

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು


ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು


ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ಎತ್ತಿಕೊಳಲು ಹೋದರದಕೆ ಕೋಪ ಬರುವುದು


ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು

ಕಿರಿಚಿಕೊಂಡು ತನ್ನ ಮೈಯ ಪರಚಿಕೊಳುವುದು


ಮೈಯ ಪರಚಿಕೊಂಡು ಪಾಪ ಅತ್ತು ಕರೆವುದು

ಅಳಲು ಕಣ್ಣಿನಿಂದ ಸಣ್ಣ ಮುತ್ತು ಸುರಿವುದು


ಪಾಪ ಅತ್ತರಮ್ಮ ತಾನು ಅತ್ತುಬಿಡುವಳು

"ಅಯ್ಯೋ ಪಾಪ" ಎಂದುಕೊಂಡು ಮುತ್ತು ಕೊಡುವಳು


ಪಾಪ ಪಟ್ಟು ಹಿಡಿದ ಹಠವು ಸಾರ್ಥಕವಾಯಿತು

ಕಿರಿಚಿ ಪರಚಿ ಅಳುವುದೆಲ್ಲ ಅರ್ಥವಾಯಿತು


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಗೆಜ್ಜೆ ಘಲ್ಲು ಸಾಜೆನುತ


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಗೆಜ್ಜೆ ಘಲ್ಲು ಸಾಜೆನುತ 


ಘಲ್ಲು ಘಲ್ಲೆನುತ ಗೆಜ್ಜೆ ಘಲ್ಲು ಸಾಜೆನುತ ಗೆಜ್ಜೆ ಘಲ್ಲು ಸಾಜೆನುತ 

ಬಲ್ಲಿದ ರಂಗನ ವಲ್ಲಿಯ ಮ್ಯಾಲೆ ಚೆಲ್ಲಿದರೋಕುಳಿಯೊ,ನಮ್ || ಪ ||


ಅರೆದರು ಅರಿಶಿಣವ ಅದಕೆ ಬೆರೆಸೆರು ಸುಣ್ಣಾವ

ಅಂದವುಳ್ಳ ರಂಗನ ಮ್ಯಾಲೆ ಗಂಧದೋಕುಳಿಯೊ, ನಮ್ ||1||


ಹಾಲಿನೋಕುಳಿಯೋ ಒಳ್ಳೆ ಲೀಲಾದೋಕುಳಿಯೊ

ಲೋಲನಾದ ರಂಗನ ಮ್ಯಾಲೆ ಹಾಲಿನೋಕುಳಿಯೊ, ನಮ್ ||2||


ತುಪ್ಪದೋಕುಲಿಯೋ ಒಳ್ಳೆ ಒಪ್ಪದೋಕುಳಿಯೋ

ಒಪ್ಪವುಳ್ಳ ರಂಗನ ಮ್ಯಾಲೆ ತುಪ್ಪದೋಕುಳಿಯೊ, ನಮ್ ||3||


ಗಂಧದೋಕುಳಿಯೋ ಒಳ್ಳೆ ಚೆಂದದೋಕುಳಿಯೋ

ಅಂದವಾದ ರಂಗನ ಮೇಲೆ ರಂಗಿನೋಕುಳಿಯೊ, ನಮ್ ||4|| 

ನಿಂಬಿಯಾ ಬನಾದ ಮ್ಯಾಗಳ


ನಿಂಬಿಯಾ ಬನಾದ ಮ್ಯಾಗಳ


ನಿಂಬಿಯಾ ಬನಾದ ಮ್ಯಾಗಳ ಚಂದ್ರಾಮ ಚೆಂಡಾಡಿದ|


ಎದ್ದೋನೆ ನಿಮಗ್ಯಾನ ಏಳುತಲಿ ನಿಮಗ್ಯಾನ

ಸಿದ್ಧಾರ ಗ್ಯಾನ ಶಿವೂ ಗ್ಯಾನ

ಸಿದ್ಧಾರ ಗ್ಯಾನ ಶಿವೂ ಗ್ಯಾನ ಮಾ ಶಿವನೆ

ನಿದ್ರೆಗಣ್ಣಾಗೆ ನಿಮಗ್ಯಾನ


ಆರೇಲಿ ಮಾವಿನ ಬೇರಾಗಿ ಇರುವೋಳೆ

ಓಲ್ಗಾದ ಸದ್ದಿಗೆ ಒದಗೋಳೆ

ಓಲ್ಗಾದ ಸದ್ದೀಗೆ ಒದಗೋಳೆ ಸರಸತಿಯೆ

ನಮ್ ನಾಲಿಗೆ ತೊಡಿರ ಬಿಡಿಸವ್ವಾ


ಎಂಟೆಲಿ ಮಾವಿನ ದಂಟಾಗಿ ಇರುವೋಳೆ

ಗಂಟೆ ಸದ್ದೀಗೆ ಒದಗೋಳೆ

ಗಂಟೆ ಸದ್ದೀಗೆ ಒದಗೊಳೆ ಸರಸತಿಯೆ

ನಮ್ ಗಂಟಾಲ ತೊಡರ ಬಿಡಿಸವ್ವಾ


ರಾಗಿ ಬೀಸೋಕಲ್ಲೆ ರಾಜಾನ ಒಡಿಗಲ್ಲೆ

ರಾಯ ಅಣ್ಣಯ್ನ ಅರಮನೆ

ರಾಯ ಅಣ್ಣಯ್ನ ಅರಮನೆಯ ಈ ಕಲ್ಲೆ

ನೀ ರಾಜಾ ಬೀದೀಲಿ ದನಿದೋರೆ


ಕಲ್ಲವ್ವಾ ಮಾತಾಯಿ ಮಲ್ಲವ್ವಾ ರಾಗೀಯ

ಜಲ್ಲಾ ಜಲ್ಲಾನೆ ಉದುರವ್ವಾ

ಜಲ್ಲಾ ಜಲ್ಲಾನೆ ಉದುರವ್ವ ನಾ ನಿನಗೆ

ಬೆಲ್ಲಾದಾರತಿಯ ಬೆಳಗೇನು

ನೀ ಹೀಂಗ ನೋಡಬ್ಯಾಡ ನನ್ನ


ನೀ ಹೀಂಗ ನೋಡಬ್ಯಾಡ ನನ್ನ

(https://youtu.be/L4f3c63uSkU?si=_qQgkptfGpbBObQg)

ನೀ ಹೀಂಗ ನೋಡಬ್ಯಾಡ ನನ್ನ

ನೀ ಹೀಂಗ ನೋಡಿದರೆ ನನ್ನ

ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ? ||


ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ

ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ

ಮಲಗಿರುವ ಕೂಸು ಮಲಗಿರಲಿ ಅಲ್ಲಿ ಮುಂದಿನದು ದೇವರ ಚಿತ್ತ

ನಾ ತಡೀಲಾರೆ ಅದು ಯಾಕ ನೋಡತೀ ಮತ್ತ ಮತ್ತ ನೀ ಇತ್ತ?


ದಾರೀಲೆ ನೆನೆದೆ ಕೈ ಹಿಡಿದೆ ನೀನು ತಣ್ಣಾಗ ಅಂತ ತಿಳಿದು

ಬಿಡವೊಲ್ಲಿ ಇನ್ನುನೂ ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು

ಮುಗಿಲನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ

ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ?


ಇಬ್ಬನಿ ತೊಳೆದರೂ ಹಾಲು ಮೆತ್ತಿದಾ ಕವಳಿ ಕಂಟಿಯ ಹಣ್ಣು    

ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು?

ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ

ಹುಣ್ಣಿವಿ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ


ನಿನ್ನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚ ನಗಿ ಯಾಕ?

ಹನಿ ಒಡೆಯಲಿಕ್ಕೆ ಬಂದಂತ ಮೋಡ ತಡಧಾಂಗ ಗಾಳಿಯ ನೆವಕ

ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕ ಮರಸತೀ ದುಃಖ?

ಎದೆ ಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ

ಮುಂಜಾನೆದ್ದು ಕುಂಬಾರಣ್ಣ... - ಜನಪದ ಗೀತೆ


ಮುಂಜಾನೆದ್ದು ಕುಂಬಾರಣ್ಣ... - ಜನಪದ ಗೀತೆ

(https://youtu.be/CzsvwfWFl30?si=BLV-t6eL36b5Ci23) 

ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡನ

ಹಾರ್ ‍ಹಾರಿ ಮಣ್ಣಾ ತುಳಿದಾನ

ಹಾರಿ ಹಾರ್ಯಾರಿ ಮಣ್ಣಾ ತುಳಿಯುತ್ತ ಮಾಡ್ಯಾನ

ನಾರ್ಯಾರು ಹೊರುವಂತ ಐರಾಣಿ ||


ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡನ

ಘಟ್ಟೀಸಿ ಮಣ್ಣಾ ತುಳಿದಾನ

ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ

ಮಿತ್ರೇರು ಹೊರುವಂತ ಐರಾಣಿ


ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ

ಗಿಂಡೀಲಿ ತಂದೀವಿ ತಿಳಿದುಪ್ಪ

ಗಿಂಡೀಲಿ ತಂದೀವಿ ತಿಳಿದುಪ್ಪ ಕುಂಬಾರಣ್ಣ

ತುಂಬೀಡು ನಮ್ಮ ಐರಾಣಿ


ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು

ಕೊಡದ ಮ್ಯಾಲೇನ ಬರೆದಾಳ

ಕೊಡದ ಮ್ಯಾಲೇನ ಬರೆದಾಳ್ ಕಲ್ಯಾಣದ

ಶರಣ ಬಸವಣ್ಣನ ನಿಲಿಸ್ಯಾಳ

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು

ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು ನಮ್ಮ ಮನೆಯಲೊಂದು ಸಣ್ಣ ಪಾಪವಿರುವುದು ಎತ್ತಿಕೊಳಲು ಹೋದರದಕೆ ಕೋಪ ಬರುವುದು ಕೋಪ ಬರಲು ಗಟ್ಟಿಯಾಗಿ ಕಿರಿಚಿಕೊಳುವುದು ಕಿರಿಚಿಕೊಂಡು...